ಮೂರು ಸಾಗರ ನೂರು ಮ೦ದಿರ ದೈವಸಾಸಿರವಿದ್ದರೆ, ಗ೦ಗೆ ಇದ್ದರೆ,ಸಿ೦ಧು ಇದ್ದರೆ, ಗಿರಿ ಹಿಮಾಲಯವಿದ್ದರೆ, ವೇದ ಇದ್ದರೆ,ಭೂಮಿ ಇದ್ದರೆ ಘನ ಪರ೦ಪರೆ ಇದ್ದರೆ... ಏನು ಸಾರ್ಥಕ ಮನೆಯ ಜನರೇ ಮಲಗಿ ನಿದ್ರಿಸುತಿದ್ದರೆ....?
ಮೂರು ಸಾಗರ ನೂರು ಮಂದಿರ ದೈವಸಾಸಿರವಿದ್ದರೆ ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತ್ತಿದರೆ! ||೩||
ಮಾತೃಭೂಮಿಯ ಮಕ್ಕಳಾದರೆ ಈಗ ನಿದ್ರಿಸಲೊಲ್ಲಿರಿ ಮೈಯರಕ್ತವು ಶುದ್ಧವಿದ್ದರೆ ಈಗ ತೋರಿಸಬಲ್ಲಿರಿ ಅಡಿಯ ಮುಂದಿಡೆ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ ಕಡನಾಳಿರಿ ನಭವನಳೆಯಿರಿ ಯಂತ್ರತಂತ್ರವ ನಿರ್ಮಿಸಿ ||೪||
ಒಳ್ಳೆಯ ಕವನ.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.
ReplyDeleteಸರ್ ಈ ಕವನ ನನ್ನದಲ್ಲ.......ಇದನ್ನು ಬರೆದ ಕವಿ ನನಗೆ ಗೊತ್ತಿಲ್ಲ ಆದರೆ ಅದರಲ್ಲಿ ಇರುವ ಅರ್ಥ ತು೦ಬಾ ಚೆನಾಗಿದೆ ಅ೦ತ ಪ್ರಕಟಿಸಿದೆ
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು
ಮೇಲಿನ ಕವಿತೆಯ ಮೂರ್ಣ ರೂಪ
ReplyDeleteಇದನ್ನು ಬರೆದವರು ದಿ: ಶಿವರಾಮು
ವೀರ ಘೋಷಣೆ ವೀರಘರ್ಜನೆ ಗೈಯೆ ವಿಜಯೋಪಾಸನೆ
ಶಕ್ತಿ ಇಲ್ಲದೆ ಮುಕ್ತಿಯಿಲ್ಲವು ಇದು ಚರಿತ್ರೆಯ ಭೋಧನೆ ||ಪ||
ಒಬ್ಬರಾಗುತ ಒಬ್ಬದೇವರು ಹುಟ್ಟಿಬಂದರು ಬಂದರೂ
ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರೂ
ಗೊಡ್ಡು ಮನದಲಿ ಅಡ್ಡ್ಬಿದ್ದೆವು ನಮ್ಮಡಿಯ ಹಿಂದಿಟ್ಟೆವು
ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು ||೧||
ಉದ್ಧರೇದಾತ್ಮನಾತ್ಮಾನಮ್ ನಾವೇ ಪಠಿಸಿದುದಲ್ಲವೇ?
ಕೋವಿ ಕತ್ತಿಯನಿಟ್ಟು ಸುಮ್ಮನೆ ನಾವೆ ಪೂಜಿಸಲಿಲ್ಲವೇ?
ಪೂಜೆ ಏತಕೆ ಪಠನವೇತಕೆ ಗೈದವೆಂಬುದ ಬಲ್ಲೆವೇ?
ಶಸ್ತ್ರವೇತಕೆ ಶಾಸ್ತ್ರವೇತಕೆ ಎಂಬುದನು ಮರೆತಿಲ್ಲವೇ? ||೨||
ಮೂರು ಸಾಗರ ನೂರು ಮಂದಿರ ದೈವಸಾಸಿರವಿದ್ದರೆ
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ
ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ
ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತ್ತಿದರೆ! ||೩||
ಮಾತೃಭೂಮಿಯ ಮಕ್ಕಳಾದರೆ ಈಗ ನಿದ್ರಿಸಲೊಲ್ಲಿರಿ
ಮೈಯರಕ್ತವು ಶುದ್ಧವಿದ್ದರೆ ಈಗ ತೋರಿಸಬಲ್ಲಿರಿ
ಅಡಿಯ ಮುಂದಿಡೆ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ
ಕಡನಾಳಿರಿ ನಭವನಳೆಯಿರಿ ಯಂತ್ರತಂತ್ರವ ನಿರ್ಮಿಸಿ ||೪||
ಸಾರ್ ಇದರ ವಿಸ್ತಾರ ರೂಪ ಸಿಗಬಹುದಾ?
ReplyDeleteಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ ಎಂದಲ್ಲವೇ...?
ReplyDelete