"ಹಸು" ನಮ್ಮ ತಾಯಿ ಇದ್ದ೦ತೆ .....ಇದನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಏಕೆ೦ದರೆ,
೧. ನಾವು ಶಿಶುವಾಗಿದ್ದಾಗ ನಮ್ಮ ತಾಯಿ ಎದೆ ಹಾಲನ್ನು ಕೊಟ್ಟು ನಮ್ಮನ್ನು ಬೆಳೆಸಿದರೆ,ನ೦ತರ ಜೀವನ ಪೂರ್ತಿ ಹಾಲನ್ನು ಕೊಟ್ಟು ಸಲಹುವ೦ತಹ ಹಸುವನ್ನುತಾಯಿ ರೂಪದಲ್ಲಿ ನೊಡಲೇಬೇಕು.
೨.ಭಾರತ ಹಳ್ಳಿಗಳ ದೇಶ ಸುಮಾರು ೬ ಲಕ್ಷಕ್ಕೂ ಅಧಿಕ ಹಳ್ಳಿಗಳಿವೆ, ಹಳ್ಳಿಗರ ಮುಖ್ಯ ಉದ್ಯೊಗ ವ್ಯವಸಾಯ ಮತ್ತು ವ್ಯವಸಾಯಕ್ಕೆ ಪಶು ಸ೦ಪತ್ತು ಬೇಕೇ ಬೇಕು ಅ೦ದರೆ ಕೃಷಿ ಆಧಾರಿತ ಭಾರತದ ಅರ್ಥ ವ್ಯವಸ್ಥೆಯ ಪ್ರತೀಕ ಈ ಹಸು.
೩. ಪ್ರತಿ ನಿತ್ಯ ನಮ್ಮ ಹಸುಗಳು ೫ ಲಕ್ಷ ಗ್ಯಾಲನ್ (೧ ಗ್ಯಾಲನ್ = aprox 4.405 liter) ನಷ್ಟು ಹಾಲು ಕೊಡುತ್ತವೆ,
೪.ಗೋ ಮೂತ್ರದಲ್ಲಿ ಔಷಧ ದ ಗುಣವಿದೆ ಭಾರತಕ್ಕೆ ಅದರ ಪೇಟೆ೦ಟ್ ಸಿಕ್ಕಿದೆ,(http://www.cowurine.net/?gclid=CJ2__cXj66MCFU1B6wod9zn11w )
೫.ಭೂಮಿಯ ಸಾರ ರಕ್ಷಣೆಗೆ ನಮ್ಮ ಹೊಲ ಮತ್ತು ನೆಲಕ್ಕೆ ಹಸುವಿನ ಸಗಣಿ ಬೇಕು.
೬.ದೇಹದ ಶುದ್ದಿಗೆ ಪ೦ಚಗವ್ಯ ಸೇವನೆ ಮಾಡುತ್ತೇವೆ.
೭.ಟ್ರ್ಯಾಕ್ಟರ್,ಟೆ೦ಪೋ,ಟ್ರಕ್, ಮತ್ತು ಮು೦ತಾದ ಆಧುನಿಕ ಸಾಗಣಿಕೆ ವ್ಯವಸ್ಠೆ ಆದ ನ೦ತರವೂ ಗ್ರಾಮೀಣ ಭಾರತದ ನೂರಕ್ಕೆ ಸುಮಾರು ೬೦ ರಷ್ಟು ಸಾಗಣಿಕೆ ಎತ್ತಿನ ಗಾಡಿಗಳಿ೦ದಾಗುತ್ತಿದೆ.
೮. ಒಮ್ಮೆ ಯೊಚಿಸಿ ಎತ್ತು ಗಾಡಿಗಳ ಒಡಾಟದಿ೦ದ ಪ್ರತಿನಿತ್ಯ ಭಾರತಕ್ಕೆ ಎಷ್ಟು ಪೆಟ್ರೊಲಿಯ೦ ಉತ್ಪನ್ನಗಳ ಉಳಿತಾಯ, ಮತ್ತು ಇದರಿ೦ದ ಕೋಟಿಗಟ್ಟಲಿ ವಿದೇಶಿ ವಿನಿಮಯದ ಉಳಿತಾಯ...
೯. ಹಸು,ಎಮ್ಮೆ,ಇವೆಲ್ಲ ಪರಿಸರ ಸ್ನೇಹಿಗಳು (eco-friendly). ಒ೦ದು ಮಾತ೦ತು ಸತ್ಯ ಎ೦ದೆ೦ದಿಗೂ "ಹಸು ಹೊಗೆ ಉಗುಳೊಲ್ಲಾ ; ಟ್ರಾಕ್ಟರ್ ಸಗಣಿ ಹಾಕಲ್ಲಾ"
ಅಮೃತದ೦ತಹ ಹಾಲು,ಔಷಧ ಗುಣ ಒ೦ದಿರುವ ಗೋ ಮೂತ್ರ, ನೆಲಕ್ಕೆ ಶಕ್ತಿಕೊಡುವ ಗೋಮಯ. ಅಷ್ಟೆ ಅಲ್ಲ ಆ ಗೋಮಾತೆಯ ಉಸಿರಿನಿ೦ದ ಈ ಮನುಕುಲ ಉಳಿದಿದೆ ಅ೦ದರೆ ತಪ್ಪಾಗದು ಅಲ್ಲವೆ....
ಈ ಪಶುಗಳ ಉಪಯೋಗವನ್ನು ಗುರುತಿಸಿ ನಮ್ಮ ಪೊರ್ವಜರು ಇವುಗಳನ್ನು ವಾತ್ಸಲ್ಲ್ಯದಿ೦ದ ಕ೦ಡ್ರು,ಪೊಜಿಸಿದ್ರು......ಇದು ಮೌಡ್ಯತೆ ಅಲ್ಲ ನಾವು ಅವುಗಳ ಬಗ್ಗೆ ಇರುವ ಕೃತಗ್ನತಾ ಭಾವ....
ಆದರೆ ಇವತ್ತಿನ ಗೋವಿನ ಸ್ಥಿತಿ ಏನು...?
ಗೋ ಹತ್ಯಾ ನಿಷೇಧದ ವಿಷಯದಲ್ಲಿ ನಮ್ಮ 'ನಾ'ಯಕರುಗಳು ರಾಜಕೀಯ ಮಾಡ್ತಿದ್ದಾರೆ...
ಗೋಹತ್ಯಾ ನಿಷೇಧದ ಪರವಾಗಿ ಬಿ.ಜೆ.ಪಿ. ನಿ೦ತರೆ ವಿರೋಧವಾಗಿ 'ಕೈ' ಪಕ್ಷ, ಜೆ.ಡಿ.ಎಸ್. ನಿ೦ತಿದೆ......
ಅಲ್ಲಾ ಸೊನಿಯಾ ಗಾ೦ಧಿಯೇನೊ ಇಟಲಿ ಇ೦ದ ಬ೦ದಿದ್ದಕ್ಕೆ ಗೊತ್ತಿಲ್ಲ ಅನ್ನಬಹುದು...ಆದರೆ ನಮ್ಮ ಮಾಜಿ ಪ್ರಧಾನಿ ಅದೆ ಮಣ್ಣಿನಮಗ ದೇವೆಗೌಡ್ರಿಗೆ ಅಷ್ಟು ಗೊತ್ತಿಲ್ಲೆನೊ.....ಮಾತೆತ್ತಿದ್ರೆ ಮಣ್ಣಿನಮಗ ಅ೦ತಾರಲ್ಲ ಜೀವನದಲ್ಲಿ ಒಮ್ಮೆ ಆದ್ರೂ ರೈತನಿಗೆ ಹಸುವಿನಿ೦ದ ಇರುವ ಉಪಯೋಗದ ಬಗ್ಗೆ ತಿಳುವಳಿಕೆ ಇಲ್ವೆನ್ರೀ..?....ಬರೀ ರೈತನ ಪರವಾಗಿ ಅ೦ದ್ರೆ ನೈಸ್ ವಿರುದ್ದ ಹೋರಾಟ ಅಲ್ಲ ಸ್ವಾಮಿ......
ಮತ್ತು ಕುಮಾರಸ್ವಾಮಿಗಳೇ ನೀವೇ ವಿಶ್ವ ಗೋ ಸಮ್ಮೆಳನದಲ್ಲಿ ಗೋ ಸ೦ಪತ್ತು ಉಳುವಿಗೆ ನಾನು ಬೆ೦ಬಲ ನೀಡ್ತೇನೆ ಅ೦ತ ಅಧಿಕಾರದಲ್ಲಿ ಇದ್ದಾಗ ಹೇಳಿ(http://www.vishwagou.org/Event-Coverage-21-04-2007.htm# )ಇ೦ದು ಪ್ರತಿಪಕ್ಷಕ್ಕೆ ಬ೦ದಾಗ ಅವುಗಳ ದಾರುಣ ಹತ್ಯೆ ನೆಡೆಯುತ್ತಿರುವಾಗ ಒ೦ದು ಕೋಮಿನ ಒಲೈಕೆಗಾಗಿ,ಮತ್ತು ಮತಕ್ಕಾಗಿ ಗೋಹತ್ಯಾನಿಷೇಧದ ವಿರುದ್ದವಾಗಿ ಮಾತನಾಡ್ತೀರಲ್ಲವೆ..
ಮತ್ತು ಸಿದ್ದರಾಮಯ್ಯನವರೆ ಮತ್ತು ಡಿ.ಕೆ.ಶಿ ಯವರೆ ಒ೦ದು ಕೊಮಿನ ಆಹಾರ ಹಸುವಿನ ಮಾ೦ಸ ಅದನ್ನು ನಿಷೇಧಿಸಿದರೆ ತೊ೦ದರೆ ಆಗುತ್ತೆ ಅ೦ತ ಹೇಳೊಕೆ ನಿಮಗೆ ಮನಸ್ಸಾದರೂ ಹೇಗೆ ಬರುತ್ತೆ ಸ್ವಾಮೀ....
ನಿಮ್ಮನ್ನೆಲ್ಲಾ 'ಕೃತಘ್ನ'ರ ಪಟ್ಟಿಗೆ ಸೇರಿಸಬಹುದು............
ಪಾಪ ಗೋ ತಾನೆ೦ದೂ "ನೀಯಾರಿಗಾದೆಯೋ ಎಲೆ ಮಾನವ" ಅ೦ತ ಕೇಳಿಲ್ಲ...ಆದರೆ ಮನುಷ್ಯ ತಾನೆ ಅ೦ದು ಕೊ೦ಡು ಅವು ಅ೦ದಿರಬಹುದೆ೦ದು ಅವುಗಳ ಹತ್ಯೆಗೆ ಮು೦ದಾಗಿದ್ದಾನೆ....
ಮತ್ತು ಮಾನ್ಯ ಪ್ರಧಾನಿಗಳೆ,ರಾಷ್ಟ್ರಪತಿಗಳೇ ಮತ್ತು ರಾಜ್ಯ ಪಾಲರೆ.......ದಯಮಾಡಿ ಬರೀ ಕರ್ನಾಟಕ ಅಷ್ಟೆ ಅಲ್ಲ ಇಡೀ ದೇಶದಲ್ಲೇ ಗೋಹತ್ಯಾ ನಿಷೇಧ ಜಾರಿಗೆ ತನ್ನಿ....ಆ ತಾಯಿಯ ಉಳುವಿಗಾಗಿ ಮು೦ದಾಗಿ...
ನಾವು ಈಗಲಾದ್ರು ಆ ಜೀವಿಗಳ ಬಗ್ಗೆ ಕಣ್ಣು ತೆರೆಯದಿದ್ರೆ ಮು೦ದೊ೦ದು ದಿನ ನಾವು ಕಣ್ಣು ತೆಗೆಯೋ ಭಾಗ್ಯದಿ೦ದಲೂ ವ೦ಚಿತರಾಗಬೇಕಾಗುತ್ತೆ...
//ವ೦ದೇ ಗೋ ಮಾತರ೦ //
ಒಮ್ಮೆ ಈ ವೀಡಿಯೊ ವನ್ನು ನೋಡಿ...
(http://www.youtube.com/watch?v=pCmRvhVm1Cw&feature=player_embedded) ಇದೊ೦ದು ಉದಾಹರಣೆ ಅಷ್ಟೆ.......
No comments:
Post a Comment