Thursday, September 23, 2010


ಮೂರು ಸಾಗರ ನೂರು ಮ೦ದಿರ ದೈವಸಾಸಿರವಿದ್ದರೆ,
ಗ೦ಗೆ ಇದ್ದರೆ,ಸಿ೦ಧು ಇದ್ದರೆ, ಗಿರಿ ಹಿಮಾಲಯವಿದ್ದರೆ,
ವೇದ ಇದ್ದರೆ,ಭೂಮಿ ಇದ್ದರೆ ಘನ ಪರ೦ಪರೆ ಇದ್ದರೆ...
ಏನು ಸಾರ್ಥಕ ಮನೆಯ ಜನರೇ ಮಲಗಿ ನಿದ್ರಿಸುತಿದ್ದರೆ....
?

5 comments:

  1. ಒಳ್ಳೆಯ ಕವನ.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.

    ReplyDelete
  2. ಸರ್ ಈ ಕವನ ನನ್ನದಲ್ಲ.......ಇದನ್ನು ಬರೆದ ಕವಿ ನನಗೆ ಗೊತ್ತಿಲ್ಲ ಆದರೆ ಅದರಲ್ಲಿ ಇರುವ ಅರ್ಥ ತು೦ಬಾ ಚೆನಾಗಿದೆ ಅ೦ತ ಪ್ರಕಟಿಸಿದೆ
    ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  3. ಮೇಲಿನ ಕವಿತೆಯ ಮೂರ್ಣ ರೂಪ
    ಇದನ್ನು ಬರೆದವರು ದಿ: ಶಿವರಾಮು

    ವೀರ ಘೋಷಣೆ ವೀರಘರ್ಜನೆ ಗೈಯೆ ವಿಜಯೋಪಾಸನೆ
    ಶಕ್ತಿ ಇಲ್ಲದೆ ಮುಕ್ತಿಯಿಲ್ಲವು ಇದು ಚರಿತ್ರೆಯ ಭೋಧನೆ ||ಪ||

    ಒಬ್ಬರಾಗುತ ಒಬ್ಬದೇವರು ಹುಟ್ಟಿಬಂದರು ಬಂದರೂ
    ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರೂ
    ಗೊಡ್ಡು ಮನದಲಿ ಅಡ್ಡ್ಬಿದ್ದೆವು ನಮ್ಮಡಿಯ ಹಿಂದಿಟ್ಟೆವು
    ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು ||೧||

    ಉದ್ಧರೇದಾತ್ಮನಾತ್ಮಾನಮ್ ನಾವೇ ಪಠಿಸಿದುದಲ್ಲವೇ?
    ಕೋವಿ ಕತ್ತಿಯನಿಟ್ಟು ಸುಮ್ಮನೆ ನಾವೆ ಪೂಜಿಸಲಿಲ್ಲವೇ?
    ಪೂಜೆ ಏತಕೆ ಪಠನವೇತಕೆ ಗೈದವೆಂಬುದ ಬಲ್ಲೆವೇ?
    ಶಸ್ತ್ರವೇತಕೆ ಶಾಸ್ತ್ರವೇತಕೆ ಎಂಬುದನು ಮರೆತಿಲ್ಲವೇ? ||೨||

    ಮೂರು ಸಾಗರ ನೂರು ಮಂದಿರ ದೈವಸಾಸಿರವಿದ್ದರೆ
    ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ
    ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ
    ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತ್ತಿದರೆ! ||೩||

    ಮಾತೃಭೂಮಿಯ ಮಕ್ಕಳಾದರೆ ಈಗ ನಿದ್ರಿಸಲೊಲ್ಲಿರಿ
    ಮೈಯರಕ್ತವು ಶುದ್ಧವಿದ್ದರೆ ಈಗ ತೋರಿಸಬಲ್ಲಿರಿ
    ಅಡಿಯ ಮುಂದಿಡೆ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ
    ಕಡನಾಳಿರಿ ನಭವನಳೆಯಿರಿ ಯಂತ್ರತಂತ್ರವ ನಿರ್ಮಿಸಿ ||೪||

    ReplyDelete
  4. ಸಾರ್ ಇದರ ವಿಸ್ತಾರ ರೂಪ ಸಿಗಬಹುದಾ?

    ReplyDelete
  5. ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ ಎಂದಲ್ಲವೇ...?

    ReplyDelete