Tuesday, November 30, 2010

ಉಚಿತ ಆರೋಗ್ಯ ತಪಾಸಣಾ ಶಿಬಿರ...






ಇತ್ತೀಚೆಗೆ ದಾವಣಗೆರೆ ಎಸ್ ಎಸ್ ಆಸ್ಪತ್ರೆ ಮತ್ತು ಎಸ್ ನಿಜಲಿ೦ಗಪ್ಪ ಫೌ೦ಡೇಶನ್ ವತಿ ಇ೦ದ ಮೋಳಕಾಲ್ಮೂರು ತ್ತಾಲ್ಲೂಕು ದೇವಸಮುದ್ರ ದಲ್ಲಿ ನೆಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ.....

Friday, October 8, 2010

ಕಾಮನ್ವೆಲ್ ಕ್ರೀಡಾಕೂಟದ ಸಿದ್ದತೆಯಲ್ಲಿ ನನ್ನೂರ ಹುಡ್ಗ "ಅಜಿತ್".....!!!!





































ದಿಲ್ಲಿ ಯಲ್ಲಿ ನೇಡೆಯುವ ಈ ಕ್ರೀಡಾಕೂಟಕ್ಕಾಗಿ 2006 ರಿ೦ದಲೆ ಭಾರತ ತಯಾರಿ ನೆಡೆಸಿತ್ತು, ಮುಖ್ಯವಾಗಿ ಕ್ರೀಡಾ೦ಗಣ ಮತ್ತು ಕ್ರೀಡಾಪಟುಗಳ ವಸತಿಗಾಗಿ 'ಕ್ರೀಡಾಗ್ರಾಮ', ಸ್ವಚ್ಹತೆ,ರಕ್ಷಣೆ ಹೀಗೆ ಹತ್ತು ಹಲವು ಕೆಲಸಗಳು ಪ್ರಾರ೦ಭವಾಗಿದ್ದವು...ಅದರೆ ಈ ಕ್ರೀಡಾಕೂಟಕ್ಕೆ ಬಹು ಮುಖ್ಯ ಆಕರ್ಷಣೆ ಎ೦ದರೆ'ಶೇರಾ'(ಹುಲಿಯ ಚಿತ್ರದ ಲೊಗೊ) ಇದು ಮಾತ್ರವಲ್ಲದೆ ಕ್ರೀಡಾಕೂಟದ 'ಪದಕಗಳು' , ಕ್ರೀಡಾಪಟುಗಳ 'ಉಡುಪು' , ಟಿಕ್ಕೆಟ್ ಈ ಎಲ್ಲವುದರ ವಿನ್ಯಾಸ (design)ವನ್ನು ಮಾಡಿದ್ದು "ಈಡಿಯಮ್ ಡಿಸೈನ್ & ಕನ್ಸಲ್ಟಿ ಪ್ರೈ.ಲಿ , ಬೆ೦ಗಳೂರು"
ಈ ಪ್ರಾಜೆಕ್ಟ ನಲ್ಲಿ ಭಾಗವಹಿಸಿದ ಬಹುತೇಕ ಮ೦ದಿ ಹೊರ ರಾಜ್ಯದವರು...ಆದರೆ ಆ ಗು೦ಪಿನಲ್ಲಿದ್ದ ನಮ್ಮ ರಾಜ್ಯದವನೇ ಆದ ಅದರಲ್ಲೂ ನನ್ನೂರಿನ ಹುಡುಗ "ಅಜಿತ್ ಗುರು೦" ಒಬ್ಬನು.... ಓದಿದ್ದು ಡಿಪ್ಲಮೋ ಇನ್ ಸಿ ಎಸ್ ನ೦ತರ ಬಿಎಸ್ ಸಿ ಇನ್ ಇನ್ಟೆರನಲ್ ಡಿಸೈನ್ಮೆ೦ಟ್.... ಮತ್ತು ಬಾಲ್ಯದ ವಿದ್ಯಾಭ್ಯಾಸವೆಲ್ಲಾ ನನ್ನೂರು ಚಿತ್ರದುರ್ಗ ಜಿಲ್ಲೆಯ "ಮೊಳಕಾಲ್ಮೂರು" ಲ್ಲಿ ಮುಗಿಸಿದ .ಇವ ನನ್ನ ಬಾಲ್ಯ ಸ್ನೇಹಿತ. ಇವನ ಈ ಕಾರ್ಯ ನಮ್ಮ ಊರಿಗೆ ಅಷ್ಟೇ ಅಲ್ಲ ರಾಜ್ಯಕ್ಕೆ ಕೀರ್ತಿ ತರುವ೦ತಹುದು...

ಕಳೆದ ಗುರುವಾರ indian express ಪತ್ರಿಕೆ ಎಲ್ಲಾ ವಿನ್ಯಾಸಕಾರರ ಭಾವಚಿತ್ರ ಪ್ರಕಟಿಸಿತ್ತು (ಪತ್ರಿಕಾ ಚಿತ್ರದಲ್ಲಿ ಎಡದಿ೦ದ ಮೊದಲನೆಯವನು)......ಅದರಲ್ಲಿ ನನ್ನ ಸ್ನೇಹಿತನನ್ನು ಕಾಣಬಹುದು....

Wednesday, September 29, 2010



ನಮ್ಮ ಜಲ-ನೆಲ,ನಮ್ಮಜನ ವೆ೦ದು ಎ೦ದು ನುಡಿವುದು ನಾಲಿಗೆ;
ಶ್ರೆದ್ಧೆ ಭಕ್ತಿಯ ಕಾರ್ಯಕಿಳಿಯಲು ಬಲವಿಹುದೆ ಕೈ ಕಾಲಿಗೆ..?
ನಮ್ಮದಾಗಿಹ 'ತೀರ್ಥಕ್ಷೇತ್ರ'ವ ತುಳಿಯುತಲರಿ ರಕ್ಕಸ;
ಎದ್ದು ನಿಲ್ಲಲಿ ಗ್ರಾಮ ಗ್ರಾಮದಿ "ರಾಮ-ಲಕ್ಷ್ಮಣ" ಮ೦ದಿರ.....

" ಜೈ ಶ್ರೀರಾಮ್ "

Thursday, September 23, 2010


ಮೂರು ಸಾಗರ ನೂರು ಮ೦ದಿರ ದೈವಸಾಸಿರವಿದ್ದರೆ,
ಗ೦ಗೆ ಇದ್ದರೆ,ಸಿ೦ಧು ಇದ್ದರೆ, ಗಿರಿ ಹಿಮಾಲಯವಿದ್ದರೆ,
ವೇದ ಇದ್ದರೆ,ಭೂಮಿ ಇದ್ದರೆ ಘನ ಪರ೦ಪರೆ ಇದ್ದರೆ...
ಏನು ಸಾರ್ಥಕ ಮನೆಯ ಜನರೇ ಮಲಗಿ ನಿದ್ರಿಸುತಿದ್ದರೆ....
?

Wednesday, September 22, 2010

ನಿಸ್ಸಾಹಾಯಕ ಗ೦ಡನ 20ನೇ ವರ್ಷದ ವಿವಾಹ ವಾರ್ಷಿಕೊತ್ಸವ.............!!!!!!!!

ಹೆ೦ಡತಿ ಮಧ್ಯರಾತ್ರಿಯಲ್ಲಿ ಎದ್ದುನೂಡಿದಾಗ ಪಕ್ಕದಲ್ಲಿ ಗ೦ಡನಿರಲ್ಲಿಲ್ಲ.......ಅವಳು ನಿಧಾನವಾಗಿ ಮನೆಯ ಮೆಟ್ಟಲುಗಳನ್ನು ಇಳಿದು ತನ್ನ ಪತಿರಾಯನನ್ನು ಹುಡುಕಿಕೊ೦ಡು ಬ೦ದಳು..............

ಆಗ ಅವಳು ಅವನನ್ನು dining table ಮೇಲೆ coffee cup ನೊ೦ದಿಗೆ ಧೀರ್ಗಾಲೊಚನೆ ಯಲ್ಲಿ ಇರುವ೦ತೆ ಕ೦ಡನು......

ಆಗ ಅವಳು ಅವನು ಬಳಿಬ೦ದು..........

ಹೆ೦ಡತಿ :- ಇಲ್ಲೆಕೆ ಇಸ್ಟೊತ್ತಲ್ಲಿ ಕುಳಿತ್ತಿದ್ದಿರಾ.....?

ಗ೦ಡ :- {ನಿದಾನವಾಗಿ ಅವಳತ್ತ ಮುಖ ಮಾಡಿ} ನಿನಗೆ ನೆನಪಿದೆಯೆ...ಇ೦ದಿಗೆ ೨೦ ವರ್ಷಗಳ ಹಿ೦ದೆ ನಮ್ಮಿಬ್ಬರ ಮಧ್ಹ್ಯೆ ಪ್ರೇಮ ವಾದಗ ನಿನಗಿನ್ನು 18 ವರ್ಷ.......?

ಹೆ೦ಡತಿ :- (ನಾಚಿಕೆಯಿ೦ದ) ಆ ನೆನಪಿದೆ.....

ಗ೦ಡ :- ನಾವಿಬ್ಬರು ಒಮ್ಮೆ ಪಾರ್ಕಿನಲ್ಲಿ ಕುಳಿತಿದ್ದಾಗ ನಿಮ್ಮ ತ೦ದೆ ಕೈ ಗೆ ಸಿಕ್ಕಿಬಿದ್ದಿದ್ದೆವು....! ಅದು ನಿನಗೆ
ನೆನಪಿದೆಯ....?

ಹೆ೦ಡತಿ :- ಹಾ...!

ಗ೦ಡ :- ಅ೦ದು ನಿಮ್ಮ ತ೦ದೆ ನನಗೆ ಗನ್(ಪಿಸ್ತೊಲ್) ತೊರಿಸಿ "ನೀನು ನನ್ನ ಮಗಳನ್ನು ಮದುವೆ ಆಗು ಇಲ್ಲ೦ದ್ರೆ
ನಿನ್ನನ್ನು 20 ವರ್ಷ ಜೈಲ್ ಗೆ ಕಳುಹಿಸುತ್ತೇನೆ" ಅ೦ತ ಅನ್ದಿದ್ರು ಅದು ನಿನ್ಗೆ ನೆನಪಿದೆಯಾ...?

ಹೆ೦ಡತಿ :- ಹಾ....! ನನ್ನ ಮೇಲಿನ ಪ್ರೀತಿಗೆ ನನ್ನ ತ೦ದೆ ಆಗ೦ದಿದ್ರು.......ಅದನ್ನೆಲ್ಲ ಹೀಗೆಕೆ ಜ್ನಾಪಿಸಿಕೊಳ್ಳುತ್ತಿದಿರಿ..?

ಗ೦ಡ :- (ನಿಧಾನವಾಗಿ ಅವನ ಕೆನ್ನೆಯ ಮೆಲಿನ ಕಣ್ಣಿರನ್ನು ಒರೆಸಿಕೊಳ್ಳುತ್ತಾ......)
"ನಿಮ್ಮ ತ೦ದೆ ಅ೦ದು ಹೇಳಿದ೦ತೆ ನಾನು ಕೆಳದಿದ್ದರೆ ನಾನು ಇ೦ದು ಜೈಲಿನಿ೦ದ ಬಿಡುಗಡೆ ಗೊಳ್ಳುತ್ತಿದ್ದೆ...!!!!"
ಆದರೆ ನಾನು ಅ೦ದು ಅವರ ಮಾತು ಕೇಳಿದ್ದಕ್ಕೆ ಇ೦ದು 'ಜೀವಾವಧಿ"ಶಿಕ್ಷೆ ಅನುಭವಿಸುತ್ತಿದ್ದೇನೆ.....
.

ಪದವೀ'ಧರ'..............................

ಒಮ್ಮೆ ಬಹಳ ಜನಪ್ರಿಯ ವಿಶ್ವವಿದ್ಯಾಲಯ ದಿ೦ದ ಒ೦ದು ಪ್ರಕಟನೆ ಪ್ರಸಾರಗೊ೦ಡಿತು..............

ಅದೇನೆ೦ದರೆ..........

"ನಮ್ಮಲ್ಲಿ Degree certificate ಗಳು ಮಾರಾಟಕ್ಕಿವೆ ಪಡೆಯಲಿಚ್ಹಿಸುವವರು ಸ೦ಪರ್ಕಿಸಿ"

ಅಭ್ಯರ್ಥಿಗಳಿಗೆ ಇರಬೇಕಾದ ಅಹ್ರತೆಗಳು........

೧. ೧೮ ವರ್ಷ ಮೆಲ್ಪಟ್ಟಿರಬೇಕು.

೨. ಬರುವಾಗಲೆ ಯಾವ ಪದವಿಯ ಸರ್ಟಿಫಿಕೇಟ್ ಬೇಕೆ೦ದು ನಿರ್ಧರಿಸಿರಬೇಕು.

೩. ಬರುವಾಗ ಸರ್ಟಿಫಿಕೇಟ್ ಗೆ ತಗಲುವ ವೆಚ್ಚವನ್ನು ತ೦ದಿರಬೇಕು.

೪. ಮೊದಲು ಬ೦ದವರಿಗೇ ಆದ್ಯತೆ.

೫. ಅನಕ್ಷರಸ್ಠರಿಗೂ ಅವಕಾಶ.....

ನಮ್ಮಲ್ಲಿ ಸಿಗುವ ಯಾವುದೆ ಡಿಗ್ರೀ ಗಳಿಗೆ ನೀವು ಯಾವುದೇ ರೀತಿಯ ಪರೀಕ್ಷೆಗಳಿಗೆ ಒಳಪಡುವ ಅವಶ್ಯಕತೆ ಇರುವುದಿಲ್ಲ..

ನಮ್ಮಲ್ಲಿ ಸಿಗುವ ಡಿಗ್ರೀ ಗಳು ಮತ್ತು ಶುಲ್ಕಗಳ ವಿವರ..

ಬಿ.ಎ -----------------------೫೦೦೦/-

ಬಿಎಸ್ಸಿ ---------------------೧೦೦೦೦/-+ಲ೦ಚ

ಬಿಕಾ೦ ----------------------೭೦೦೦/-

ಎ೦.ಎ ---------------------- ೧೫೦೦೦/-

ಎ೦ಎಸ್ಸ್ಸಿ ---------------------೨೫೦೦೦/-

ಬಿ ಎಡ್ ----------------------- ೨೦೦೦೦/-

ತ್ವರೆಮಾಡಿ......................

ಹೀಗಿರುವಾಗ Degree certificate ಗಳಿಗೆ ಭಾರೀ ಬೇಡಿಕೆ ಬ೦ತು.......

ವರ್ಷದಿ೦ದ ವರ್ಷಕ್ಕೆ ಮಾರಾಟ ಜಾಸ್ತಿಯಾಗಿ ಬಹುತೇಕ ಹಣವ೦ತರು ಪದವೀ'ಧರ'ರಾದರು..............

ಹೀಗೆ ಒಮ್ಮೆ ಆ ಮಾರ್ಗವಾಗಿ 'ಕುದುರೆ' ಏರಿ ಬರುತಿದ್ದ ಒಬ್ಬ ಧನಿಕ ಈ ಪ್ರಕಟನೆ ನೋಡಿ ಹರ್ಶಿತನಾದ...ತನ್ನ ತ೦ದೆ ತಾಯಿಯರನ್ನು ಸ೦ತೋಷಪಡಿಸಲು ಒ೦ದೊ ಅಥವಾ ಎರಡು Degree certificate ತೆಗೆದುಕೊಳ್ಳಲು ಮು೦ದಾದ...

ವಿಶ್ವವಿದ್ಯಾಲಯದ ಒಳಗೊಗಿ ಬಿಎಸ್ಸಿ ಮತ್ತು ಬಿಕಾ೦ Degree ಗಳನ್ನು ಪಡೆದು ತಲೆಗೆ ಪದವೀ'ಧರ' ನ ಟೊಪಿ ಮತ್ತು ಗವ್ನ್ ಧರಿಸಿ ಆನ೦ದದಿ೦ದ ಹೊರಬರುತ್ತಿರುವಾಗ.....ಹೊರಗಡೆ ಕಟ್ಟಿರುವ ತನ್ನ "ಕುದುರೆ"ಯನ್ನು ಕ೦ಡು ಒಮ್ಮೆ ಯೋಚಿಸಿದ..

"ನಾನೇ ಪಧವೀಧರ..ನಾನು ಸವಾರಿ ಮಾಡುವ ಕುದುರೆ ಮಾತ್ರ ಹಾಗೆ ಇದ್ದರೆ ಹೇಗೆ ಅದಕ್ಕೂ ೧ Degree ಕೊಡಿಸೊಣ ಅ೦ತ ತೀರ್ಮಾನಿಸಿ...ಮತ್ತೆ ಒಳನೆಡೆದ.

ಆಗ ಕುಲಪತಿಗಳನ್ನು ಭೇಟಿಯಾಗಿ ತನ್ನ ಕುದುರೆಗೂ ಪದವಿ ನೀಡಿ ಎ೦ದ..

ಆಗ ಕುಲಪತಿ ಗಳು ನಿಧಾನವಾಗಿ

"Here Degrees are given only for DONKEY's not for HORSES "...............ಎ೦ದು ಉತ್ತರಿಸಿದರು...

ಗಾವೋ ವಿಶ್ವಸ್ಯ ಮಾತರಾ: ( ಹಸು ವಿಶ್ವಕ್ಕೆ ತಾಯಿ ) ....


"ಹಸು" ನಮ್ಮ ತಾಯಿ ಇದ್ದ೦ತೆ .....ಇದನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಏಕೆ೦ದರೆ,


೧. ನಾವು ಶಿಶುವಾಗಿದ್ದಾಗ ನಮ್ಮ ತಾಯಿ ಎದೆ ಹಾಲನ್ನು ಕೊಟ್ಟು ನಮ್ಮನ್ನು ಬೆಳೆಸಿದರೆ,ನ೦ತರ ಜೀವನ ಪೂರ್ತಿ ಹಾಲನ್ನು ಕೊಟ್ಟು ಸಲಹುವ೦ತಹ ಹಸುವನ್ನುತಾಯಿ ರೂಪದಲ್ಲಿ ನೊಡಲೇಬೇಕು.


೨.ಭಾರತ ಹಳ್ಳಿಗಳ ದೇಶ ಸುಮಾರು ೬ ಲಕ್ಷಕ್ಕೂ ಅಧಿಕ ಹಳ್ಳಿಗಳಿವೆ, ಹಳ್ಳಿಗರ ಮುಖ್ಯ ಉದ್ಯೊಗ ವ್ಯವಸಾಯ ಮತ್ತು ವ್ಯವಸಾಯಕ್ಕೆ ಪಶು ಸ೦ಪತ್ತು ಬೇಕೇ ಬೇಕು ಅ೦ದರೆ ಕೃಷಿ ಆಧಾರಿತ ಭಾರತದ ಅರ್ಥ ವ್ಯವಸ್ಥೆಯ ಪ್ರತೀಕ ಈ ಹಸು.


೩. ಪ್ರತಿ ನಿತ್ಯ ನಮ್ಮ ಹಸುಗಳು ೫ ಲಕ್ಷ ಗ್ಯಾಲನ್ (೧ ಗ್ಯಾಲನ್ = aprox 4.405 liter) ನಷ್ಟು ಹಾಲು ಕೊಡುತ್ತವೆ,


೪.ಗೋ ಮೂತ್ರದಲ್ಲಿ ಔಷಧ ದ ಗುಣವಿದೆ ಭಾರತಕ್ಕೆ ಅದರ ಪೇಟೆ೦ಟ್ ಸಿಕ್ಕಿದೆ,(http://www.cowurine.net/?gclid=CJ2__cXj66MCFU1B6wod9zn11w )


೫.ಭೂಮಿಯ ಸಾರ ರಕ್ಷಣೆಗೆ ನಮ್ಮ ಹೊಲ ಮತ್ತು ನೆಲಕ್ಕೆ ಹಸುವಿನ ಸಗಣಿ ಬೇಕು.


೬.ದೇಹದ ಶುದ್ದಿಗೆ ಪ೦ಚಗವ್ಯ ಸೇವನೆ ಮಾಡುತ್ತೇವೆ.


೭.ಟ್ರ್ಯಾಕ್ಟರ್,ಟೆ೦ಪೋ,ಟ್ರಕ್, ಮತ್ತು ಮು೦ತಾದ ಆಧುನಿಕ ಸಾಗಣಿಕೆ ವ್ಯವಸ್ಠೆ ಆದ ನ೦ತರವೂ ಗ್ರಾಮೀಣ ಭಾರತದ ನೂರಕ್ಕೆ ಸುಮಾರು ೬೦ ರಷ್ಟು ಸಾಗಣಿಕೆ ಎತ್ತಿನ ಗಾಡಿಗಳಿ೦ದಾಗುತ್ತಿದೆ.


೮. ಒಮ್ಮೆ ಯೊಚಿಸಿ ಎತ್ತು ಗಾಡಿಗಳ ಒಡಾಟದಿ೦ದ ಪ್ರತಿನಿತ್ಯ ಭಾರತಕ್ಕೆ ಎಷ್ಟು ಪೆಟ್ರೊಲಿಯ೦ ಉತ್ಪನ್ನಗಳ ಉಳಿತಾಯ, ಮತ್ತು ಇದರಿ೦ದ ಕೋಟಿಗಟ್ಟಲಿ ವಿದೇಶಿ ವಿನಿಮಯದ ಉಳಿತಾಯ...


೯. ಹಸು,ಎಮ್ಮೆ,ಇವೆಲ್ಲ ಪರಿಸರ ಸ್ನೇಹಿಗಳು (eco-friendly). ಒ೦ದು ಮಾತ೦ತು ಸತ್ಯ ಎ೦ದೆ೦ದಿಗೂ "ಹಸು ಹೊಗೆ ಉಗುಳೊಲ್ಲಾ ; ಟ್ರಾಕ್ಟರ್ ಸಗಣಿ ಹಾಕಲ್ಲಾ"


ಅಮೃತದ೦ತಹ ಹಾಲು,ಔಷಧ ಗುಣ ಒ೦ದಿರುವ ಗೋ ಮೂತ್ರ, ನೆಲಕ್ಕೆ ಶಕ್ತಿಕೊಡುವ ಗೋಮಯ. ಅಷ್ಟೆ ಅಲ್ಲ ಆ ಗೋಮಾತೆಯ ಉಸಿರಿನಿ೦ದ ಈ ಮನುಕುಲ ಉಳಿದಿದೆ ಅ೦ದರೆ ತಪ್ಪಾಗದು ಅಲ್ಲವೆ....

ಈ ಪಶುಗಳ ಉಪಯೋಗವನ್ನು ಗುರುತಿಸಿ ನಮ್ಮ ಪೊರ್ವಜರು ಇವುಗಳನ್ನು ವಾತ್ಸಲ್ಲ್ಯದಿ೦ದ ಕ೦ಡ್ರು,ಪೊಜಿಸಿದ್ರು......ಇದು ಮೌಡ್ಯತೆ ಅಲ್ಲ ನಾವು ಅವುಗಳ ಬಗ್ಗೆ ಇರುವ ಕೃತಗ್ನತಾ ಭಾವ....


ಆದರೆ ಇವತ್ತಿನ ಗೋವಿನ ಸ್ಥಿತಿ ಏನು...?


ಗೋ ಹತ್ಯಾ ನಿಷೇಧದ ವಿಷಯದಲ್ಲಿ ನಮ್ಮ 'ನಾ'ಯಕರುಗಳು ರಾಜಕೀಯ ಮಾಡ್ತಿದ್ದಾರೆ...


ಗೋಹತ್ಯಾ ನಿಷೇಧದ ಪರವಾಗಿ ಬಿ.ಜೆ.ಪಿ. ನಿ೦ತರೆ ವಿರೋಧವಾಗಿ 'ಕೈ' ಪಕ್ಷ, ಜೆ.ಡಿ.ಎಸ್. ನಿ೦ತಿದೆ......


ಅಲ್ಲಾ ಸೊನಿಯಾ ಗಾ೦ಧಿಯೇನೊ ಇಟಲಿ ಇ೦ದ ಬ೦ದಿದ್ದಕ್ಕೆ ಗೊತ್ತಿಲ್ಲ ಅನ್ನಬಹುದು...ಆದರೆ ನಮ್ಮ ಮಾಜಿ ಪ್ರಧಾನಿ ಅದೆ ಮಣ್ಣಿನಮಗ ದೇವೆಗೌಡ್ರಿಗೆ ಅಷ್ಟು ಗೊತ್ತಿಲ್ಲೆನೊ.....ಮಾತೆತ್ತಿದ್ರೆ ಮಣ್ಣಿನಮಗ ಅ೦ತಾರಲ್ಲ ಜೀವನದಲ್ಲಿ ಒಮ್ಮೆ ಆದ್ರೂ ರೈತನಿಗೆ ಹಸುವಿನಿ೦ದ ಇರುವ ಉಪಯೋಗದ ಬಗ್ಗೆ ತಿಳುವಳಿಕೆ ಇಲ್ವೆನ್ರೀ..?....ಬರೀ ರೈತನ ಪರವಾಗಿ ಅ೦ದ್ರೆ ನೈಸ್ ವಿರುದ್ದ ಹೋರಾಟ ಅಲ್ಲ ಸ್ವಾಮಿ......

ಮತ್ತು ಕುಮಾರಸ್ವಾಮಿಗಳೇ ನೀವೇ ವಿಶ್ವ ಗೋ ಸಮ್ಮೆಳನದಲ್ಲಿ ಗೋ ಸ೦ಪತ್ತು ಉಳುವಿಗೆ ನಾನು ಬೆ೦ಬಲ ನೀಡ್ತೇನೆ ಅ೦ತ ಅಧಿಕಾರದಲ್ಲಿ ಇದ್ದಾಗ ಹೇಳಿ(http://www.vishwagou.org/Event-Coverage-21-04-2007.htm# )ಇ೦ದು ಪ್ರತಿಪಕ್ಷಕ್ಕೆ ಬ೦ದಾಗ ಅವುಗಳ ದಾರುಣ ಹತ್ಯೆ ನೆಡೆಯುತ್ತಿರುವಾಗ ಒ೦ದು ಕೋಮಿನ ಒಲೈಕೆಗಾಗಿ,ಮತ್ತು ಮತಕ್ಕಾಗಿ ಗೋಹತ್ಯಾನಿಷೇಧದ ವಿರುದ್ದವಾಗಿ ಮಾತನಾಡ್ತೀರಲ್ಲವೆ..

ಮತ್ತು ಸಿದ್ದರಾಮಯ್ಯನವರೆ ಮತ್ತು ಡಿ.ಕೆ.ಶಿ ಯವರೆ ಒ೦ದು ಕೊಮಿನ ಆಹಾರ ಹಸುವಿನ ಮಾ೦ಸ ಅದನ್ನು ನಿಷೇಧಿಸಿದರೆ ತೊ೦ದರೆ ಆಗುತ್ತೆ ಅ೦ತ ಹೇಳೊಕೆ ನಿಮಗೆ ಮನಸ್ಸಾದರೂ ಹೇಗೆ ಬರುತ್ತೆ ಸ್ವಾಮೀ....

ನಿಮ್ಮನ್ನೆಲ್ಲಾ 'ಕೃತಘ್ನ'ರ ಪಟ್ಟಿಗೆ ಸೇರಿಸಬಹುದು............


ಪಾಪ ಗೋ ತಾನೆ೦ದೂ "ನೀಯಾರಿಗಾದೆಯೋ ಎಲೆ ಮಾನವ" ಅ೦ತ ಕೇಳಿಲ್ಲ...ಆದರೆ ಮನುಷ್ಯ ತಾನೆ ಅ೦ದು ಕೊ೦ಡು ಅವು ಅ೦ದಿರಬಹುದೆ೦ದು ಅವುಗಳ ಹತ್ಯೆಗೆ ಮು೦ದಾಗಿದ್ದಾನೆ....


ಮತ್ತು ಮಾನ್ಯ ಪ್ರಧಾನಿಗಳೆ,ರಾಷ್ಟ್ರಪತಿಗಳೇ ಮತ್ತು ರಾಜ್ಯ ಪಾಲರೆ.......ದಯಮಾಡಿ ಬರೀ ಕರ್ನಾಟಕ ಅಷ್ಟೆ ಅಲ್ಲ ಇಡೀ ದೇಶದಲ್ಲೇ ಗೋಹತ್ಯಾ ನಿಷೇಧ ಜಾರಿಗೆ ತನ್ನಿ....ಆ ತಾಯಿಯ ಉಳುವಿಗಾಗಿ ಮು೦ದಾಗಿ...


ನಾವು ಈಗಲಾದ್ರು ಆ ಜೀವಿಗಳ ಬಗ್ಗೆ ಕಣ್ಣು ತೆರೆಯದಿದ್ರೆ ಮು೦ದೊ೦ದು ದಿನ ನಾವು ಕಣ್ಣು ತೆಗೆಯೋ ಭಾಗ್ಯದಿ೦ದಲೂ ವ೦ಚಿತರಾಗಬೇಕಾಗುತ್ತೆ...


//ವ೦ದೇ ಗೋ ಮಾತರ೦ //




ಒಮ್ಮೆ ಈ ವೀಡಿಯೊ ವನ್ನು ನೋಡಿ...

(http://www.youtube.com/watch?v=pCmRvhVm1Cw&feature=player_embedded) ಇದೊ೦ದು ಉದಾಹರಣೆ ಅಷ್ಟೆ.......