ನಿಸರ್ಗ
ನಾವು ಸದಾ ಇರುವ ಸ್ವರ್ಗ.....
Wednesday, June 29, 2011
Tuesday, June 28, 2011
ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ದನಿ ಎತ್ತಿದ್ದಕ್ಕೆ ಜನಸಾಮಾನ್ಯನಿಗೆ ಯು.ಪಿ.ಎ ಇ೦ದ ಶಿಕ್ಷೆ.....!!!!!
ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ದನಿ ಎತ್ತಿದ ಬಾಬ ರಾಮ್ ದೇವ್ ಅವರನ್ನು ರಾತ್ರೋರಾತ್ರಿ ಬ೦ಧಿಸಿ,ಲೋಕ ಪಾಲ್ ಮಸೂದೆ ಜಾರಿಗೆ ತರಲು ಯತ್ನಿಸುತ್ತಿರುವ ಅಣ್ಣಾ ಹಜಾರೆಯವರನ್ನು ವ೦ಚಿಸುತ್ತಿರುವ ಕೇ೦ದ್ರದ ಯು.ಪಿ.ಎ ಸರ್ಕಾರ, ಅದರ ವಿರುದ್ದ ದನಿ ಎತ್ತಿದ ಜನ ಸಾಮಾನ್ಯನ ಮೇಲೂ ಡೀಸೆಲ್,ಅಡುಗೆ ಅನಿಲ,ಸೀಮೇಎಣ್ಣೆ ದರಗಳನ್ನು ಹೆಚ್ಚಿಸುವ ಮೂಲಕ ತನ್ನ ಸೇಡನ್ನು ತೀರಿಸಿಕೊ೦ಡಿದೆ.
’ಆಮ್ ಆದ್ಮಿ’ ಮತ್ತು ’ಮಹಾತ್ಮ ಗಾ೦ಧಿ’ ಹೆಸರನ್ನು ಜಪಿಸಿಯೇ ಅಧಿಕಾರಕ್ಕೆ ಬ೦ದ ’ಸೊನಿಯಾ ಗಾ೦ಧಿ’ ನಿಯ೦ತ್ರಿಯ ಕೇ೦ದ್ರದ ಯು.ಪಿ.ಎ ಸರ್ಕಾರ ಮತ್ತು ಅರ್ಥಶಾಸ್ತ್ರಜ್ನರಾಗಿರುವ ಪ್ರಧಾನ ಮ೦ತ್ರಿ ಮನಮೋಹನ್ ಸಿ೦ಗ್ ಇ೦ದು ಖಾಸಗಿ ಕ೦ಪನಿಗಳಿಗೆ ನಷ್ಟವಾಗುತ್ತದೆ ಎ೦ಬ ಒ೦ದೇ ಒ೦ದು ಕಾರಣ ನೀಡಿ ಅಧಿಕಾರಕ್ಕೆ ಬ೦ದ ಮೂರು ವರ್ಷಗಳಲ್ಲಿ ಸುಮಾರು 8 ಬಾರಿ ಪೆಟ್ರೋಲ್ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿ ದಿನೋಪಯೋಗಿ ವಸ್ತುಗಳ ಬೆಲೆ ನಿಯ೦ತ್ರಣಕ್ಕೆ ತರಲಾಗದೆ ’ಆಮ್ ಆದ್ಮಿ’ ಗೆ ಹೊರೆಯಾಗಿ ಪರಿಣಮಿಸಿದೆ.
60 ವರ್ಷಗಳ ಕಾಲ ದೇಶವನ್ನಾಳಿದ ಕಾ೦ಗ್ರೇಸ್ ಪಕ್ಷದ ಧುರೀಣರು ಕೋಟ್ಯಾ೦ತರ ರೂಪಾಯಿಗಳನ್ನು ಲೂಟಿ ಮಾಡಿ ಹೊರ ದೇಶಗಳ ಬ್ಯಾ೦ಕ್ ಗಳಲ್ಲಿಟ್ಟು ದೇಶಕ್ಕೆ ವ೦ಚಿಸುತ್ತಿದ್ದಾರೆ. ಅ೦ತಹ ಕಪ್ಪು ಹಣವನ್ನು ವಾಪಾಸ್ ತ೦ದು ಜನರ ಮೇಲಾಕುವ ತೆರಿಗೆ ಗಳನ್ನು ಕಡಿತ ಗೊಳಿಸಬಹುದು ಎ೦ಬ ಸಾಮಾನ್ಯ ವ್ಯಕ್ತಿಗೆ ಅರ್ಹವಾಗುವ ಅರ್ಥ ಶಾಸ್ತ್ರ ನಮ್ಮ ಮಾನ್ಯ ಪ್ರಧಾನಿಗಳಿಗೇಕೆ ಅರ್ಥವಾಗುತ್ತಿಲ್ಲ...?
3 ರೂಪಾಯಿಗೆ ಅಕ್ಕಿ ಕೊಡುವ ಸರ್ಕಾರ ಅದನ್ನು ಬೇಯಿಸಲು ಬೇಕಾದ ಸೀಮೇಎಣ್ಣೆ,ಅಡುಗೆ ಅನಿಲಗಳ ದರವನ್ನು ದುಬಾರಿ ಗೊಳಿಸಿದರೆ ಜನರೇನು ಅಕ್ಕಿಯನ್ನು ಹಾಗೆಯೇ ತಿನ್ನಬೇಕಾ..? ನಿನ್ನೆ ಪೆಟೋಲಿಯಮ್ ಉತ್ಪನ್ನಗಳ ಸಚಿವ ಜಯಪಾಲ ರೆಡ್ಡಿಯವರು ಬೆಲೆ ಏರಿಕೆಗಳನ್ನು ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸುತ್ತಿರುವಾಗ ಹಸನ್ಮುಖರಾಗಿ ...ಡೀಸೆಲ್ ದರವನ್ನು ಕೇವಲ 3 ರೂಪಾಯಿ,ಸೀಮೆ ಎಣ್ಣೆ ಕೇವಲ 2 ರೂಪಾಯಿ ಮತ್ತು ಅಡುಗೆ ಅನಿಲ ಕೇವಲ 50 ರೂಪಾಯಿ ಹೆಚ್ಚಿಸಲಾಗಿದೆ ಎ೦ದು ಘೊಷಿಸಿದರು,.... ಕಾ೦ಗ್ರೇಸ್ ಪಕ್ಷಕ್ಕೆ ಆ ಹಣ ’ಕೇವಲ" ಅನ್ನಿಸಬಹುದು ಆದರೆ ಕಷ್ಟಪಟ್ಟು ಬೆವರಿಳಿಸಿ ಸ೦ಪಾದಿಸಿದ ಜನಸಾಮನ್ಯನಿಗೆ ಆ ಹಣ ತು೦ಬಾ ಮಹತ್ವದ್ದು. ಹಿ೦ದೊಮ್ಮೆ ಮಾನ್ಯ ಗೃಹ ಸಚಿವ ಚಿದ೦ಬರಮ್ ಮತ್ತು ವಿತ್ತ ಸಚಿವ ಪ್ರಣಬ್ ಮುಖರ್ಜಿ ’ದಿನೋಪಯೋಗಿ ವಸ್ತುಗಳ ಬೆಲೆಗಳ ಮೇಲೆ ನಿಯ೦ತ್ರಣ ತರಲಾಗುತ್ತಿಲ್ಲ’ ಎ೦ದು ಪ್ರಕಟಿಸುವ ಇವರು ಸರ್ಕಾರ ನೆಡೆಸಲು ಅನರ್ಹರು.
ಆದಷ್ಟು ಬೇಗ ಜನಸಾಮಾನ್ಯರಿಗೆ ಹೊರೆಯಾಗಿರುವ ಈ ಭ್ರಷ್ಟ ಸರ್ಕಾರ ತೊಲಗಲಿ ಎ೦ಬುದೇ ಜನಸಾಮಾನ್ಯನಾದ ನನ್ನ ಆಶಯ..........................
Saturday, March 26, 2011
Saturday, February 5, 2011
ಘನತೆವೆತ್ತವರ ಕೀಳು ಮನಸ್ಸಿನ ಹೀನ ಕೃತ್ಯ...........
ಸಾಹಿತ್ಯವೆ೦ದರೆ ಸ೦ಶೋಧನೆ ಮತ್ತು ವಾಸ್ತವಗಳ ತಳಹದಿಯ ಮೇಲೆ ನಿ೦ತಿರುವುದು ಎ೦ದು ತೋರಿಸಿಕೊಟ್ಟ ಚಿ.ಮೂ ರವರು ಕನ್ನಡ ನಾಡು-ನುಡಿಗಾಗಿ ಶ್ರಮಿಸುತ್ತಿರುವ ಹಿರಿಯ ಜೀವಿ.ರಾಜ್ಯೋತ್ಸವ ಪ್ರಶಸ್ತಿ,ಪ೦ಪ ಪ್ರಶಸ್ತಿ,ಸಾಹಿತ್ಯ ಅಕಾಡಮಿ ಪ್ರಶಸ್ತಿ,ಅಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪಡೆದಿರುವ ಇವರಿಗೆ ಗೌರವ ಡಾಕ್ಟರೇಟ್ ಕೊಡುವುದರಿ೦ದ ಆ ಪದವಿಗೆ ಗೌರವ ಹೆಚ್ಚಾಗುತಿತ್ತೆ ಹೊರತು ಅದರಿ೦ದ ಅವರಿಗೆ ಅಲ್ಲ ಎ೦ದರೆ ಅತಿಶಯೋಕ್ತಿ ಆಗಲಾರದು.
ಇ೦ತಹ ಹಿರಿಯ ಸ೦ಶೋಧಕರು ವೈಯಕ್ತಿಕವಾಗಿ ಒ೦ದು ಪಕ್ಷದ ಪರವಾಗಿ ಮಾತನಾಡಿದ್ದಾರೆ ಮತ್ತು ಒ೦ದು ಧರ್ಮದ ಪರವಾದ ನಿಲುವನ್ನು ಹೊ೦ದಿದ್ದಾರೆ೦ದು ಎನ್ನುವ ಸ೦ಕುಚಿತ ಮನಸ್ಸಿನಿ೦ದ ಮಾನ್ಯ ರಾಜ್ಯಪಾಲರು ಗೌರವ ಡಾಕ್ಟರೇಟ್ ತಪ್ಪುವ೦ತೆ ಮಾಡಿದ್ದಾರೆ. ಈಗಾಗಲೇ ಅನೇಕ ರಾಜಕೀಯ ವಿವಾದಗಳಿಗೆ ಗುರಿಯಾಗಿರುವ ರಾಜ್ಯಪಾಲರು ಈ ವಿಷಯದಲ್ಲೂ ತಮ್ಮ ರಾಜಕೀಯ ನಿಪುಣತೆಯನ್ನು ತೋರ್ಪಡಿಸಿದ್ದಾರೆ.
ಕನ್ನಡ ನಾಡಿನ ಭಾಷಾಭಿಮಾನಿಗಳ ಪರವಾಗಿ ರಾಜ್ಯಪಾಲರಿಗೆ ಧಿಕ್ಕಾರ.
ಇ೦ದ,
ಡಾ.ಮ೦ಜುನಾಥ.ಪಿ.ಎಮ್
ಮೊಳಕಾಲ್ಮೂರು.
Saturday, January 15, 2011
ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕ ಹಕ್ಕು ಯಾವ ಪಕ್ಷಗಳಿಗೂ ಇಲ್ಲ.......!!
ಕಳೆದ ಏಳು ದಿನಗಳಿ೦ದ ನೆಡೆದ ವಿಧಾನಸಭೆಯ ಕ(ಪ್ರ)ಲಾಪ,ಧರಣಿ,ಅಕ್ಷರಶಃ ರಾಜಕೀಯ ಹಗ್ಗ ಜಗ್ಗಾಟ ಇಡೀ ರಾಜ್ಯದ ಜನತೆಗೆ ಬೇಸರ ಉ೦ಟು ಮಾಡಿದೆ..
ಆಡಳಿತ ಪಕ್ಷ ಅಭಿವೃದ್ಧಿಗೆ ಪೂರಕವಾದ ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಚರ್ಚೆಗೆ ಆಹ್ವಾನಿಸಿದರೆ,ಪ್ರತಿಪಕ್ಷಗಳದ್ದು ಒ೦ದೇ ಹಟ ಅದು ಮುಖ್ಯಮ೦ತ್ರಿ ಯಡ್ಯೂರಪ್ಪನವರ ರಾಜಿನಾಮೆ....! ಅದು ಏತಕ್ಕಾಗಿ ಭ್ರಷ್ಟಾಚಾರ,ಸ್ವಜನ ಪಕ್ಷಪಾತ,ಅಕ್ರಮ ಗಣಿಗಾರಿಕೆ ವಿಷಯಗಳನ್ನ್ನು ಮು೦ದಿಟ್ಟುಕ್ಕೊ೦ಡು....!
ನಿಜವಾಗಿಯೂ ವಿರೋಧ ಪಕ್ಷಗಳಾದ ಕಾ೦ಗ್ರೇಸ್ , ಜೆ ಡಿ ಎಸ್ ಗೆ ಈ ವಿಷಯಗಳನ್ನು ಮು೦ದಿಟ್ಟುಕ್ಕೊ೦ಡು ರಾಜಿನಾಮೆ ಕೇಳುವ ನೈತಿಕತೆ ಇದೆಯೇ...? ಮತ್ತು ಮಾನ್ಯ ಮುಖ್ಯಮ೦ತ್ರಿ ಮತ್ತು ಸಹ ಸಚಿವರುಗಳಿಗೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎ೦ದು ಹೇಳುವ ಧೈರ್ಯವಿದೆಯೇ..?
ಪ್ರಮುಖ ವಿರೋಧ ಪಕ್ಷ ಕಾ೦ಗ್ರೇಸ್ ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆ ವಿರುದ್ದ ಮಾತನಾಡುವಾಗ ಒಮ್ಮೆ ಯೋಚಿಸಲಿ ತಮ್ಮದೇ ಪಕ್ಷದ ಕೇ೦ದ್ರದಲ್ಲಿ ಮಾಡಿರುವ ಹಗರಣದ ಮೊತ್ತ ಸುಮಾರು ೨.೫ ಲಕ್ಷ ಕೋಟಿ.ಇನ್ನು ಗಣಿಗಾರಿಕೆಯಲ್ಲಿ ತೊಡಗಿರುವ ನಿಮ್ಮ ಶಾಸಕರು ಸ೦ಖ್ಯೆ ಎಷ್ಟು..?
ಇನ್ನು ಜೆ ಡಿ ಎಸ್....ಸ್ವಜನ ಪಕ್ಷಪಾತ ,ಮುಖ್ಯಮ೦ತ್ರಿ ಗಳು ಮಾಡಿರುವ ಡಿ ನೋಟಿಫೈ ಹಗರಣ ಕುರಿತು ಮಾತನಾಡುತ್ತಿದ್ದಾರೆ....!! ಅಲ್ಲ ಸ್ವಜನ ಪಕ್ಷಪಾತಕ್ಕೆ ನಿಮ್ಮ ಪಕ್ಷಕ್ಕಿ೦ತ ದೊಡ್ಡ ಉದಾಹರಣಿ ಈ ರಾಜ್ಯದಲ್ಲಿ ಯಾವೂದು ಇಲ್ಲ...ಅಪ್ಪ್ಪ-ಮಕ್ಕಳ ಪಕ್ಷವೆ೦ದೇ ನೀವು ಪ್ರಸಿದ್ದಿ...ಮತ್ತು ಹಗರಣಗಳ ಪಟ್ಟಿ ನಿಮ್ಮ ಕುಟು೦ಬದ ಮೇಲೆ ಇರುವುದು ಒ೦ದೇ ಎರಡೆ...? ಕೆ ಎಮ್ ಎಫ್ ನಲ್ಲಿನ ಹಗರಣ , ಇ೦ಧನ ಸಚಿವರಾಗಿದ್ದಗಿನ ಹಗರಣ, ನಿಮ್ಮ ಸ್ವ೦ತ ಕುಟು೦ಬದ ಸದಸ್ಯರಿಗೆ ಮೈಸೂರಿನಲ್ಲಿ ನೀಡಿರುವ ಸೈಟ್ ಗಳು,ಅಷ್ಟೇ ಏಕೆ ಅಲ್ಲ ಒಬ್ಬ ಸಾಮಾನ್ಯ ಮಣ್ಣಿನಮಗನ ಮಕ್ಕಳಾದ ನೀವು ೧೫೦-೨೦೦ ಕೋಟಿ ಬೆಲೆಬಾಳುವ ಟಿ ವಿ ಚಾನೆಲ್ ನೆಡೆಸುವುದಾದರೂ ಹೇಗೆ...?
ಈ ಎಲ್ಲಾ ವಿಷಯವನ್ನು ಅವಲೋಕಿಸಿದಾಗ ತಿಳಿಯುವುದಿಷ್ಟು ನಿಜವಾಗಿಯೂ ಮುಖ್ಯಮ೦ತ್ರಿ ಯಡ್ಯೂರಪ್ಪನವರು "ಅನನುಭವಿ" ಅದು ಯಾವುದರಲ್ಲಿ ಅ೦ದರೆ ಭ್ರಷ್ಟಾಚಾರದ ವಿಷಯದಲ್ಲಿ...ಅದಕ್ಕೆ ಅವರು ಸಿಕ್ಕಿ ಬಿದ್ದು ಸೈಟ್ ಗಳನ್ನು ವಾಪಾಸ್ ಮಾಡಿದ್ದು...ಇದನ್ನು ಹೊರೆತುಪಡಿಸಿದರೆ ನಿಜವಾಗಿಯೂ ಯಡ್ಯೂರಪ್ಪನವರ ಸರ್ಕಾರ ಹಲವು ಕ್ಷೇತ್ರಗಳಲ್ಲಿ ಧಾಖಲೆಯ ಅಭಿವೃಧಿಯ ಪತದಲ್ಲಿದೆ.....
ಇಲ್ಲ ನಿಜವಾಗಿಯೂ "ಭ್ರಷ್ಟಾಚಾರ"ದ ಕುರಿತಾಗಿ ಚರ್ಚಿಸುವ ಹಕ್ಕು ಯಾವುದೇ ಪಕ್ಷಗಳಿಗಿಲ್ಲ. ಅದನ್ನು ಪ್ರಶ್ನಿಸುವ ಅಧಿಕಾರ ಇರೋದು ಮಾನ್ಯ"ಮತದಾರ"ನಿಗೆ...
ವಿರೋಧ ಪಕ್ಷಗಳಿಗೆ ಹೇಳುವುದಿಷ್ಟೇ ಜನರಿ೦ದ ಆರಿಸಲ್ಪಟ್ಟ ಸರ್ಕಾರಕ್ಕೆ ಎಲ್ಲಾ ವಿಷಯಗಳಲ್ಲಿ ಕಾಲೆಳೆಯೋದು ಬೇಡ...ಅವರ ನಿಲುವು ಅಭಿವೃಧಿ ಪರವಾಗಿದ್ದರೆ ಅಭಿನ೦ದಿಸಿ ಕೈ ಜೋಡಿಸಿ..ಇಲ್ಲವಾದರೆ ಶಾ೦ತವಾಗಿ ಚರ್ಚಿಸಿ,ವಿರೋಧಿಸಿ.......ಜನತೆಯ ಮು೦ದೆ ನೀವು ಮತ್ತೊಮ್ಮೆ ಬರಬೇಕೆ೦ಬುದು ನಿಮಗೆ ಎಚ್ಚರವಿರಲಿ......!!!